Udyogini Loan: ಮಹಿಳೆಯರಿಗೆ 3 ಲಕ್ಷದವರೆಗೆ ಬಡ್ಡಿ ರಹಿತ ಸಾಲ.! 1.50 ಲಕ್ಷದವರೆಗೆ ಸಬ್ಸಿಡಿ ಕೂಡ ಸಿಗುತ್ತೆ.!
ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ ಮಹಿಳೆಯರಿಗೆ ಉದ್ಯೋಗಿನಿ ಯೋಜನೆ ಎಂಬ ಯೋಜನೆಯನ್ನು ಜಾರಿಗೆ ತರಲಾಗಿದ್ದು ಯೋಜನೆ ಹಿಡಿಯಲು ಸ್ವಂತ ಉದ್ಯೋಗ ಪ್ರಾರಂಭ ಮಾಡಲು ಬಯಸುವ ಮಹಿಳೆಯರಿಗೆ ಹಾಗೂ ಸಣ್ಣ ಪುಟ್ಟ ವ್ಯಾಪಾರ ಮಾಡುವ ಮಹಿಳೆಯರಿಗೆ 3 ಲಕ್ಷ ರೂಪಾಯಿವರೆಗೆ ಬಡ್ಡಿ ಇಲ್ಲದೆ ಸಾಲವನ್ನು ನೀಡಲಾಗುತ್ತದೆ. ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿಯಲು ಲೇಖನವನ್ನು ಕೊನೆಯವರೆಗೂ ಓದಿ.
SSLC ಮತ್ತು 2nd PUC ಪರೀಕ್ಷಾ ವೇಳಾಪಟ್ಟಿ ಬಿಡುಗಡೆ.! ಯಾವ ದಿನ ಪರೀಕ್ಷೆ ನಡೆಯಲಿವೆ.? ಇಲ್ಲಿದೆ ಮಾಹಿತಿ.!
ಉದ್ಯೋಗಿನಿ ಸಾಲ ಯೋಜನೆ (Udyogini Loan)

ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಜೊತೆ ಗುಡಿ ಮಹಿಳೆಯರಿಗೆ ಈ ಯೋಜನೆಯನ್ನು ಜಾರಿಗೆ ತಂದಿರುತ್ತದೆ ಉದ್ಯೋಗಿನಿ ಯೋಜನೆಯ ಅಡಿಯಲ್ಲಿ ಅರ್ಜಿ ಸಲ್ಲಿಸಿರುವ ಮಹಿಳೆಯರಿಗೆ 3 ಲಕ್ಷ ರೂಪಾಯಿವರೆಗೆ ಬಡ್ಡಿ ಇಲ್ಲದೆ ಸಾಲವನ್ನು ನೀಡಲಾಗುತ್ತದೆ. ಹಾಗೂ 50% ಸಾಲದ ಮೇಲಿನ ಸಬ್ಸಿಡಿಯನ್ನು ಕೂಡ ಕೆಲವು ವರ್ಗದ ಮಹಿಳೆಯರಿಗೆ ನೀಡಲಾಗುತ್ತದೆ.
ಉದ್ಯೋಗಿನಿ ಯೋಜನೆಯ ಪ್ರಯೋಜನಗಳು (Udyogini Loan)
ಸ್ವಂತ ಉದ್ಯೋಗ ಅಥವಾ ವ್ಯಾಪಾರವನ್ನು ಪ್ರಾರಂಭ ಮಾಡಲು ಮಹಿಳೆಯರಿಗೆ ಇದೊಂದು ಸುವರ್ಣ ಅವಕಾಶ ಎಂದು ಹೇಳಬಹುದು. ಯಾಕೆಂದರೆ ಯಾವುದೇ ರೀತಿಯ ಬಡ್ಡಿ ಇಲ್ಲದೆ 3 ಲಕ್ಷ ರೂಪಾಯಿ ಇವರಿಗೆ ರಾಷ್ಟ್ರೀಕೃತ ಬ್ಯಾಂಕುಗಳ ಮೂಲಕ ಈ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರಿಗೆ ಸಾಲವನ್ನು ನೀಡಲಾಗುತ್ತದೆ.
ಈ ಯೋಜನೆ ಅರ್ಜಿ ಸಲ್ಲಿಸಿರುವ ಅಂತಹ ಮಹಿಳೆಯರಿಗೆ 3 ಲಕ್ಷ ರೂಪಾಯಿವರೆಗೆ ಸಾಲವನ್ನು ಪಡೆಯುವ ಅವಕಾಶವಲ್ಲದೆ 3 ಲಕ್ಷ ರೂಪಾಯಿಯ ಮೇಲೆ 50% ನಷ್ಟು ಅಂತ ಅಂದರೆ 1,50,000 ವರೆಗೆ ಸಬ್ಸಿಡಿಯನ್ನು ಕೂಡ ಸರ್ಕಾರದ ಕಡೆಯಿಂದ ನೀಡಲಾಗುತ್ತದೆ ಅಥವಾ ಅಷ್ಟು ಹಣವನ್ನು ಮನ ಮಾಡಲಾಗುತ್ತದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮಹಿಳೆಯರಿಗೆ ಈ ಸಾಲ ಮನ್ನದ ಭಾಗ್ಯ ಯೋಜನೆ ಸಿಗುವುದು.
ಸಾಮಾನ್ಯ ವರ್ಗದ ಮಹಿಳೆಯರಿಗೆ ಈ ಯೋಜನೆ ಅಡಿಯಲ್ಲಿ 3 ಲಕ್ಷ ರೂಪಾಯಿಯ ಸಾಲ ಸಿಕ್ಕರೆ ಶೇಕಡ 30% ನಷ್ಟು ಸಾಲದ ಮೇಲಿನ ಸಬ್ಸಿಡಿ ಸಿಗುತ್ತದೆ ಅಂದರೆ 90,000 ಈ ಯೋಜನೆಯ ಅಡಿಯಲ್ಲಿ ಸಬ್ಸಿಡಿ ಅಥವಾ ಮನ್ನ ಸಿಗಬಹುದು. ಹಾಗಾಗಿ ಈ ಯೋಜನೆಯು ಲಾಭದಾಯಕ ಯೋಜನೆಯಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.!
- ಆಧಾರ್ ಕಾರ್ಡ್
- ಬ್ಯಾಂಕ್ ಅಕೌಂಟ್
- ರೇಷನ್ ಕಾರ್ಡ್
- ಮೊಬೈಲ್ ನಂಬರ್
- ಉದ್ಯೋಗದ ಪ್ರಮಾಣ ಪತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಘಟಕದ ವೆಚ್ಚದ ವರದಿ
- ಇತರೆ ಅಗತ್ಯ ದಾಖಲೆಗಳು
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು.!
- ಈ ಯೋಜನೆಯಡಿಯಲ್ಲಿ ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿರುತ್ತದೆ.
- 18 ವರ್ಷ ಮೇಲ್ಪಟ್ಟಂತಹ ಯಾವ ವರ್ಗದ ಮಹಿಳೆಯರು ಆದ್ರೂ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
- ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯ ಕುಟುಂಬದ ವಾರ್ಷಿಕ ಆದಾಯವು 1.50 ಲಕ್ಷವನ್ನು ಮೀರಿರಬಾರದು ಎಂದು ತಿಳಿದುಬಂದಿದೆ.
- ಸ್ವಂತ ಉದ್ಯೋಗವನ್ನು ಆರಂಭಿಸಲು ಬಯಸುವಂತಹ ಮತ್ತು ಸ್ವಯಂ ಉದ್ಯೋಗಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಸಬ್ಸಿಡಿಯನ್ನು ಪಡೆಯದೆ ಇರುವಂತವರು ಈ ಸಲಕ್ಕೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವುದು ಹೇಗೆ.?
ನೀವೇನಾದರೂ ಈ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಿ ಮೂರು ಲಕ್ಷದವರೆಗೆ ಬಡ್ಡಿ ರಹಿತ ಸಾಲವನ್ನು ಪಡೆಯಬೇಕೆಂದು ಬಯಸಿದರೆ ನೀವು ಈ ಕೆಳಗಡೆ ನೀಡಿರುವ ಜಾಲತಾಣವನ್ನು ಬಳಸಿಕೊಂಡು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ಬಯಸುವಂತಹ ಮಹಿಳೆಯರು ಸ್ವಂತ ಉದ್ಯೋಗ ಅಥವಾ ಉದ್ಯೋಗದ ವಿವರಗಳು ಮತ್ತು ಘಟಕದ ವೆಚ್ಚದ ವರದಿಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರ ಇರುವಂತಹ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಯೋಜನೆಯ ಹೆಚ್ಚಿನ ಮಾಹಿತಿಯನ್ನು ನಿಮ್ಮ ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ ಕೂಡ ಪಡೆದುಕೊಳ್ಳಬಹುದಾಗಿದೆ. ಹೀರೆಕನ ಮಾಹಿತಿ ಗೋಸ್ಕರ ತಿಳಿಸಲಾಗಿದ್ದು ಸಾಲದ ಹೊಣೆಗಾರಿಕೆಯಲ್ಲಿ ಮತ್ತು ಪಾಲುದಾರಿಕೆಯಲ್ಲಿ “ಕರ್ನಾಟಕ ವಿಜಯ” ಜಾಲತಾಣಕ್ಕೆ ಸಂಬಂಧವಿರುವುದಿಲ್ಲ.