January 26, 2025

Mahalakshmi N Kiral

Scholarship: ವಿದ್ಯಾರ್ಥಿಗಳಿಗೆ ಸಿಗಲಿದೆ ಬರೋಬ್ಬರಿ 25000 ಸ್ಕಾಲರ್ಶಿಪ್ ಹಣ.! ಈಗಲೇ ಅರ್ಜಿ ಸಲ್ಲಿಸಿ.!

Scholarship: ವಿದ್ಯಾರ್ಥಿಗಳಿಗೆ ಸಿಗಲಿದೆ ಬರೋಬ್ಬರಿ 25000 ಸ್ಕಾಲರ್ಶಿಪ್ ಹಣ.! ಈಗಲೇ ಅರ್ಜಿ ಸಲ್ಲಿಸಿ.!

ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ಸಮಸ್ತ ಜನತೆಗೆ ತಿಳಿಸುವುದೇನೆಂದರೆ, ಬಡತನದಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವಂತಹ ಎಲ್ಲಾ ವಿದ್ಯಾರ್ಥಿಗಳಿಗೆ ಒಂದು ಗುಡ್ ನ್ಯೂಸ್ ಇಂದ ಹೇಳಬಹುದು. ಶಿಕ್ಷಣ ಕಲಿಯಲು ಹಣದ ಅವಶ್ಯಕತೆ ಇರುವಂತ ಹಾಗೂ ಹಣದ ಕೊರತೆ ಇರುವಂತಹ ವಿದ್ಯಾರ್ಥಿಗಳಿಗೆ ಸಹಾಯವಾಗಲಿ ಎಂದು ಜೆಕೆ ಟೈರ್ ಮತ್ತು ಇಂಡಸ್ಟ್ರಿ ಲಿಮಿಟೆಡ್ ಕಂಪನಿಯ ವತಿಯಿಂದ ಶಿಕ್ಷಾ ಸಾರಥಿ ಸ್ಕಾಲರ್ಶಿಪ್ ನೀಡಲಾಗುತ್ತಿದ್ದು, ಇದರ ಬಗ್ಗೆ ಸಂಪೂರ್ಣವಾದ ಮಾಹಿತಿ ಲೇಖನವನ್ನು ಕೊನೆಯವರೆಗೂ ಓದಿದಾಗ ತಿಳಿಯುತ್ತದೆ. 

ಶಿಕ್ಷಾ ಸಾರಥಿ ಸ್ಕಾಲರ್ಶಿಪ್ – Shiksha Sarthi Scholarship 

ಈ ಸ್ಕಾಲರ್ಷಿಪನ್ನು ಜೆಕೆ ಟೈಯರ್ ಮತ್ತು ಇಂಡಸ್ಟ್ರಿ ಲಿಮಿಟೆಡ್ ಕಂಪನಿಯ ವತಿಯಿಂದ ವಿವಿಧ ಕೋಸುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು 25000 ವರೆಗೆ ಸ್ಕಾಲರ್ಶಿಪ್ ಹಣವನ್ನು ಅಂದರೆ ಸಹಾಯಧನವನ್ನು ವಿದ್ಯಾರ್ಥಿಗಳು ಪಡೆಯಬಹುದಾಗಿರುತ್ತದೆ. ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಯಾವ ವಿದ್ಯಾರ್ಥಿಗಳು ಅರ್ಹರಾಗಿರುತ್ತಾರೆ? ಮತ್ತು ಅರ್ಜಿ ಸಲ್ಲಿಸಲು ಯಾವ ಕ್ರಮಗಳನ್ನು ವಹಿಸಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.

ಈ ಸ್ಕಾಲರ್ ಶಿಪ್ ವಿದ್ಯಾರ್ಥಿಗಳು ತಮ್ಮ ಉನ್ನತವಾದ ಶಿಕ್ಷಣವನ್ನು ಮುಂದುವರಿಸಲು ಸಹಾಯವಾಗಲಿದೆ ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಕೆಳಗೆ ನೀಡಲಾಗಿರುವಂತಹ ಸಂಪೂರ್ಣವಾದ ಮಾಹಿತಿಯನ್ನು ಪಡೆದು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಮತ್ತು ಹೇಗೆ ಅರ್ಜಿ ಸಲ್ಲಿಸಬೇಕೆಂದು ಮಾಹಿತಿ ಈ ಕೆಳಗಡೆ ತಿಳಿಸಿಕೊಡಲಾಗಿದೆ. 

Scholarship ಅರ್ಜಿ ಸಲ್ಲಿಸಲು ಅರ್ಹತೆಗಳು:

  • ವಾಹನ ಚಾಲಕರ ಪುತ್ರರಿಗೆ ಈ ಸ್ಕಾಲರ್ಶಿಪ್ ಸಿಗುವ ಅವಕಾಶ ಹೆಚ್ಚಾಗಿ ಇರುತ್ತದೆ.
  • ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯ 5 ಲಕ್ಷ ಮೀರಿ ಇರಬಾರದು. 
  • ಇದು ಕೇವಲ ಒಂದೇ ಬಾರಿ ಪಡೆದುಕೊಳ್ಳುವಂತಹ ವಿದ್ಯಾರ್ಥಿ ವೇತನ ಆಗಿರುತ್ತದೆ. 

ವಿದ್ಯಾರ್ಥಿ ವೇತನದ ಪ್ರಯೋಜನ: 

ತಾಂತ್ರಿಕ ಹಾಗೂ ಪದವಿ ವಿದ್ಯಾರ್ಥಿಗಳಿಗೆ 25,000 ಸಹಾಯಧನ, ತಾಂತ್ರಿಕೇತರ ಪದವಿ ವಿದ್ಯಾರ್ಥಿಗಳಿಗೆ 15000 ಸಹಾಯಧನ ಮತ್ತು ಡಿಪ್ಲೋಮಾ ವಿದ್ಯಾರ್ಥಿಗಳಿಗೆ 15000 ಸಹಾಯಧನವನ್ನು ಈ ವಿದ್ಯಾರ್ಥಿ ವೇತನದ ಅಡಿಯಲ್ಲಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವುದು ಹೇಗೆ.?

ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಗಳು ಈ ಕೆಳಗಡೆ ನೀಡಿರುವ ಜಾಲತಾಣವನ್ನು ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ. 

ಅಪ್ಲೈ ಮಾಡಿ.!

ಮೇಲೆ ನೀಡಿರುವಂತಹ ಜಾಲತಾಣವನ್ನು ಬಳಸಿ ಶಿಕ್ಷಾ ಸಾರಥಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು 15ನೇ ತಾರೀಕು ಫೆಬ್ರವರಿ ತಿಂಗಳು 2025ನೇ ತಾರೀಕು ದಿನಾಂಕ ಕೊನೆಯದಾಗಿರುತ್ತದೆ. (15-2-2025) ಈ ಕೊನೆಯ ದಿನಾಂಕದ ಒಳಗಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

Leave a Comment