Scholarship: ವಿದ್ಯಾರ್ಥಿಗಳಿಗೆ ಸಿಗಲಿದೆ 1 ಲಕ್ಷದವರೆಗೆ ವಿದ್ಯಾರ್ಥಿ ವೇತನ.! ಈಗಲೇ ಅರ್ಜಿ ಸಲ್ಲಿಸಿ.!

ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ ವಿದ್ಯಾರ್ಥಿಗಳಿಗೆ ಒಂದು ಲಕ್ಷದವರೆಗೆ ವಿದ್ಯಾರ್ಥಿ ವೇತನವನ್ನು ನೀಡಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಆಸಕ್ತಿ ಇರುವಂತಹ ವಿದ್ಯಾರ್ಥಿಗಳು ಲೇಖನವನ್ನು ಕೊನೆಯವರೆಗೂ ಓದಬಹುದು ಈ ಲೇಖನದಲ್ಲಿ “ಎಲ್ ಜಿ ಸ್ಕಾಲರ್ ಶಿಪ್” ಗೆ ಯಾವ ರೀತಿ ಅರ್ಜಿ ಸಲ್ಲಿಸಬೇಕು ಮತ್ತು ಅರ್ಜಿ ಸಲ್ಲಿಸಲು ಬೇಕಾಗುವಂತಹ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿಕೊಡಲಾಗಿದೆ.

ಈ ಲೇಖನದಲ್ಲಿ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳುವ ಬಗೆಯನ್ನು ವಿವರಿಸಲಾಗಿರುತ್ತದೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಯಾವೆಲ್ಲ ಅರ್ಹತೆಗಳನ್ನು ವಿದ್ಯಾರ್ಥಿಗಳು ಹೊಂದಿರಬೇಕಾಗುತ್ತದೆ ಮತ್ತು ಒದಗಿಸಬೇಕಾದ ದಾಖಲೆಗಳು ಯಾವುವು ಎಂಬ ನಿಮ್ಮ ಸಕಲ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಸಂಪೂರ್ಣವಾಗಿ ಉತ್ತರಿಸಲಾಗಿದೆ. 

ಎಲ್ ಜಿ ಸ್ಕಾಲರ್ಶಿಪ್ (LG Scholarship)

ಲೈಫ್ ಗುಡ್ ಸ್ಕಾಲರ್ಶಿಪ್ ಪ್ರೋಗ್ರಾಮ್ ಈ ಸ್ಕಾಲರ್ಷಿಪ್ಪನ್ನು ಎಲ್ ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಕಂಪನಿಯಿಂದ ಪ್ರಾರಂಭ ಮಾಡಲಾಗಿರುತ್ತದೆ. ವಿದ್ಯಾರ್ಥಿಗಳು ತಮ್ಮ ಉನ್ನತ ಶಿಕ್ಷಣವನ್ನು ಮುಂದುವರಿಸಲೆಂದು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಮುಂದುವರಿಸಲು ಆರ್ಥಿಕ ನೆರವನ್ನು ಈ ವಿದ್ಯಾರ್ಥಿ ವೇತನದ ಅಡಿಯಲ್ಲಿ ನೀಡಲಾಗುತ್ತದೆ. 

ಅರ್ಜಿ ಸಲ್ಲಿಸಲು ಅರ್ಹತೆಗಳು.!

ಈ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಗಳು ಭಾರತದ ಅತ್ಯಂತ ಯಾವುದೇ ಕಾಲೇಜುಗಳಲ್ಲಿ ಅಥವಾ ಸ್ನಾತಕೋತ್ತರ ಮತ್ತು ಪದವಿ ಪೂರ್ವ ಶಿಕ್ಷಣ ಪಡೆಯುತ್ತಿರುವಂತಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. 

ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಗಳು 12ನೇ ತರಗತಿಯಲ್ಲಿ ಕನಿಷ್ಠ 60% ನಷ್ಟು ಅಂಕಗಳನ್ನು ಗಳಿಸಬೇಕು. 

ಹಾಗೂ ಎರಡು, ಮೂರು ಮತ್ತು ನಾಲ್ಕನೇ ವರ್ಷದ ಪದವಿ ವಿದ್ಯಾರ್ಥಿಗಳು ಕನಿಷ್ಠ 60% ನಷ್ಟು ಅಂಕಗಳನ್ನು ಗಳಿಸಿರಬೇಕು. 

ಈ ವಿದ್ಯಾರ್ಥಿ ವೇತನಕ್ಕೆ Buddy4Study ಹಾಗೂ ಎಲ್ಜಿ ಎಲೆಕ್ಟ್ರಾನಿಕ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ನ ಉದ್ಯೋಗಿಗಳ ಮಕ್ಕಳಾಗಿದ್ದವರು ಅರ್ಜಿ ಸಲ್ಲಿಸಲು ಅವಕಾಶವನ್ನು ನೀಡಲಾಗಿಲ್ಲ.

ವಿದ್ಯಾರ್ಥಿ ವೇತನದ ಪ್ರಯೋಜನ.!

ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿದರೆ UG ವಿದ್ಯಾರ್ಥಿಗಳಿಗೆ ಬೋಧನೆ ಶುಲ್ಕದಲ್ಲಿ 50% ಕಡಿತ ಅಥವಾ ಒಂದು ಲಕ್ಷದವರೆಗೆ ವಿದ್ಯಾರ್ಥಿ ವೇತನ ಸಿಗುತ್ತದೆ. ಮತ್ತು PG ವಿದ್ಯಾರ್ಥಿಗಳಿಗೆ ಕೂಡ ಬೋಧನೆಯಲ್ಲಿ 50% ಕಡಿತ ಅಥವಾ 2 ಲಕ್ಷದವರೆಗೆ ವಿದ್ಯಾರ್ಥಿ ವೇತನ ಸಿಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.!

  • ವಿದ್ಯಾರ್ಥಿಯ ಆಧಾರ್ ಕಾರ್ಡ್ 
  • ಆದಾಯ ಪ್ರಮಾಣ ಪತ್ರ 
  • 12ನೇ ತರಗತಿಯ ಅಂಕಪಟ್ಟಿ 
  • ಪಾಸ್ಫೋಟೋ ಅಳತೆಯ ಭಾವಚಿತ್ರ 
  • ಕಾಲೇಜಿನ ಶುಲ್ಕ ತುಂಬಿದ ರಶೀದಿ 
  • ಇನ್ನಿತರ ಪ್ರಮುಖ ದಾಖಲೆಗಳು 

ಅರ್ಜಿ ಸಲ್ಲಿಸುವುದು ಹೇಗೆ.?

ನೀವು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ವಿದ್ಯಾರ್ಥಿ ವೇತನವನ್ನು ಪಡೆಯಬೇಕೆಂದು ಬಯಸಿದರೆ ಈ ಕೆಳಗೆ ನೀಡಿರುವ ಜಾಲತಾಣವನ್ನು ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ ಅರ್ಜಿ ಸಲ್ಲಿಸಲು 31ನೇ ತಾರೀಕು ಜನವರಿ 2025 ಕೊನೆ ದಿನಾಂಕವಾಗಿದ್ದು ಅದರ ಒಳಗಾಗಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. 

ಅಪ್ಲೈ ಮಾಡಿ.!

ಮೇಲೆ ನೀಡಿರುವ ಜಾಲತಾಣವನ್ನು ಬಳಸಿ 31ನೇ ತಾರೀಖಿನ ಒಳಗಾಗಿ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು ಈ ತರಹ ದಿನನಿತ್ಯ ಹೆಚ್ಚಿನ ಹೊಸ ಸುದ್ದಿಗಳಿಗಾಗಿ ನಮ್ಮ ವೆಬ್ಸೈಟ್ನ ನೋಟಿಫಿಕೇಶನ್ ಆನ್ ಮಾಡಿಕೊಳ್ಳಿ.

Leave a Comment