Phonepe loan: ಫೋನ್ ಪೇ ಬಳಕೆದಾರರಿಗೆ ಗುಡ್ ನ್ಯೂಸ್! ಕೇವಲ 5 ನಿಮಿಷದಲ್ಲಿ 5 ಲಕ್ಷದವರೆಗೆ ಸಾಲ ಸೌಲಭ್ಯ!
ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ರಾಜ್ಯದ ಜನತೆಗೆ ತಿಳಿಸುವ ವಿಷಯವೇನೆಂದರೆ, ನೀವೇನಾದರೂ ಫೋನ್ ಪೇ ಬಳಕೆದಾರರಾಗಿದ್ದರೆ ಅತ್ಯಂತ ಕಡಿಮೆ ಸಮಯದಲ್ಲಿ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿರುತ್ತದೆ. ನೀವು ಫೋನ್ ಪೇ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಬೇಕೆಂದು ಬಯಸಿದರೆ ಯಾವೆಲ್ಲ ದಾಖಲೆಗಳು ಬೇಕಾಗುತ್ತವೆ? ಮತ್ತು ಯಾವೆಲ್ಲ ಅರ್ಹತೆಗಳನ್ನು ಹೊಂದಿರಬೇಕು? ಎಂಬ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ಪಡೆಯಬಹುದಾಗಿರುತ್ತದೆ.
ವಿದ್ಯಾಸಿರಿ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಪ್ರಾರಂಭ.! ಈಗಲೇ ಅರ್ಜಿ ಸಲ್ಲಿಸಿ.!
ಫೋನ್ ಪೇ ವೈಯಕ್ತಿಕ ಸಾಲ (Phonepe loan)
ಪ್ರತಿಯೊಬ್ಬರೂ ಕೂಡ ಯುಪಿಐ ಪಾವತಿಗಳಿಗಾಗಿ ಫೋನ್ ಪೇ ಅಪ್ಲಿಕೇಶನನ್ನು ಬಳಸುತ್ತೀರಾ. ಮೊಬೈಲ್ ನಲ್ಲಿ ಹಣ ವರ್ಗಾವಣೆ ಮಾಡಲು ಮೊಬೈಲ್ ರೀಚಾರ್ಜ್ ಮಾಡಿಕೊಳ್ಳಲು ಡಿಟಿಎಚ್ ರಿಚಾರ್ಜ್ ಮಾಡಿಕೊಡಲು ಇನ್ನಿತರ ಅವಶ್ಯಕತೆಗಳಿಗೆ ನೀವು ಯುಪಿಐ ಅಪ್ಲಿಕೇಶನ್ ಅನ್ನು ಬಳಸಿದ್ದೀರಾ. ಇದರ ಮೂಲಕ ನೀವು ಐದು ನಿಮಿಷದಲ್ಲಿ 5 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿರುತ್ತದೆ.

ಫೋನ್ ಅಪ್ಲಿಕೇಶನ್ ಸಾಕಷ್ಟು ಸಂಸ್ಥೆಗಳ ಜೊತೆಗೆ ಕೈಗೂಡಿಸಿ ಗ್ರಾಹಕರಿಗೆ ಅಂದರೆ ಅವಶ್ಯಕತೆ ಇರುವಂತಹ ಗ್ರಹಕರಿಗೆ ಕಡಿಮೆ ಬಡ್ಡಿ ದರದಲ್ಲಿ 5 ಲಕ್ಷ ವರೆಗೆ ಈ ಅಪ್ಲಿಕೇಶನ್ ಮೂಲಕ ಸಾಲವನ್ನು ನೀಡುತ್ತದೆ ಸಾಲ ಪಡೆಯಲು ಬಯಸುವಂತಹ ವ್ಯಕ್ತಿಗಳು ಸಾಲದ ಮೇಲಿನ ಬಡ್ಡಿ ದರದ ಮೇಲೆ ನಿಗಾ ವಹಿಸಬೇಕು. ಫೋನ್ ಪೇ ಅಪ್ಲಿಕೇಶನ್ನಲ್ಲಿ ಸಾಲದ ಮೇಲಿನ ಬಡ್ಡಿ ದರ ವಾರ್ಷಿಕವಾಗಿ 11% ನಿಂದ ಪ್ರಾರಂಭವಾಗುತ್ತದೆ ಮತ್ತು 31% ವರೆಗೆ ಇರಬಹುದು.
ಫೋನ್ ಪೇ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆಯಬೇಕೆಂದು ಬಯಸಿದರೆ ಬಡ್ಡಿದರವು ನಿಮ್ಮ ಸಿಬಿಲ್ ಸ್ಕೋರ್ನ ಆಧಾರದ ಮೇಲೆ ನಿರ್ಣಯ ಮಾಡಲಾಗುತ್ತದೆ ಹಾಗೂ ನಿಮ್ಮ ಮರುಪಾವತಿಯ ಅವಧಿಯ ಮೇಲೆ ಅವಲಂಬಿತವಾಗಿರುತ್ತದೆ. ಗರಿಷ್ಠ ಎರಡು ಪರ್ಸೆಂಟ್ ವರೆಗೆ ಸಂಸ್ಕಾರಣ ಶುಲ್ಕವನ್ನು ಫೋನ್ ನಲ್ಲಿ ಸಾಲವನ್ನು ಪಡೆಯಲು ಹೋದಾಗ ವಿಧಿಸಬಹುದಾಗಿದೆ. 6 ರಿಂದ 84 ತಿಂಗಳ ಒಳಗೆ ಮರುಪಾವತಿ ಅವಧಿಯನ್ನು ನಿಗದಿ ಮಾಡಲಾಗಿರುತ್ತದೆ. ಮಾಸಿಕ ಆದಾಯವನ್ನು ಪಡೆಯುವಂತಹ ವ್ಯಕ್ತಿಗಳು ಈ ಸಾಲಕ್ಕೆ ಅರ್ಜಿ ಸಲ್ಲಿಸಲು ಅರ್ಹರು.
ಸಾಲಕ್ಕೆ ಬೇಕಾಗುವ ದಾಖಲೆಗಳು (Phonepe loan)
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್
- ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಪಾನ್ ಕಾರ್ಡ್
- ಉದ್ಯೋಗದ ಪ್ರಮಾಣ ಪತ್ರ
- ಸ್ಯಾಲರಿ ಸ್ಲಿಪ್
- ವೋಟರ್ ಐಡಿ
- ಇನ್ನಿತರ ದಾಖಲೆಗಳು
ಸಾಲ ಪಡೆಯುವುದು ಹೇಗೆ? (Phonepe loan)
ನೀವೇನಾದರೂ ಫೋನ್ ಅಪ್ಲಿಕೇಶನ್ ಮೂಲಕ ಸಾಲವನ್ನು ಪಡೆಯಬೇಕೆಂದು ಬಯಸಿದರೆ ಮೊದಲು ಪ್ಲೇ ಸ್ಟೋರ್ ನಿಂದ ಫೋನ್ ಪೇ ಅಪ್ಲಿಕೇಷನ್ ಅನ್ನು ಪಡೆಯಬೇಕಾಗುತ್ತದೆ ಅಥವಾ ನಿಮ್ಮ ಮೊಬೈಲ್ ನಲ್ಲಿ ಇದ್ದರೆ ಮೊದಲು ಫೋನ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿಕೊಳ್ಳಿ.
ಕೆಳಗಡೆ ಮೆನು ಬಾರ್ ನಲ್ಲಿ ನೀವು ಲೋನ್ ಎಂಬ ಆಯ್ಕೆಯನ್ನು ನೋಡುತ್ತೀರಾ. ಅದರ ಕೆಳಗೆ ಪರ್ಸನಲ್ ಲೋನ್ ಎಂಬ ಆಯ್ಕೆಯನ್ನು ಕೂಡ ಕಾಣುತ್ತೀರಾ. ಅಲ್ಲಿ ಸಾಲದ ಮೊತ್ತ ಮತ್ತು ಮರುಪಾವತಿ ಅವಧಿ ಇನ್ನಷ್ಟು ಹೆಚ್ಚಿನ ವಿವರಗಳನ್ನು ನೀಡುವ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಸಾಲ ಪಡೆಯುವಾಗ ಸರಿಯಾದ ದಾಖಲೆಗಳನ್ನು ಅಪ್ಲೋಡ್ ಮಾಡಬೇಕಾಗುತ್ತದೆ ಅಥವಾ ಸ್ವಲ್ಪ ಸಮಯದಲ್ಲಿ ಸಾಲದ ಅನುಮೋದನೆಯ ನಂತರ ಬ್ಯಾಂಕ್ ಖಾತೆಗೆ ಅನುಮೋದನೆಯ ಹಣವನ್ನು ಜಮಾ ಮಾಡಲಾಗುವುದು. ಕೆ ವೈ ಸಿ ಸಂಬಂಧಿತ ದಾಖಲೆಗಳ ವೆರಿಫಿಕೇಶನ್ ಆದ ನಂತರ ಹಣವು ಖಾತೆಗೆ ಜಮಾ ಆಗುವುದು.
ಓದುಗರ ಗಮನಕ್ಕೆ: ಫೋನ್ ಪೇ ಮೂಲಕ ಸಾಲವನ್ನು ಪಡೆಯುವುದು ಅಥವಾ ನಿರಾಕರಿಸುವುದು ಸಂಪೂರ್ಣ ಗ್ರಾಹಕರ ಜವಾಬ್ದಾರಿಯ ಮೇಲೆ ಅವಲಂಬಿತವಾಗಿರುತ್ತದೆ ಇದಕ್ಕೆ ನಮ್ಮ ಕರ್ನಾಟಕ ವಿಜಯ ಜಾಲತಾಣವು ಯಾವುದೆ ರೀತಿಯ ಪಾಲುಗಾರಿಕೆ ಮತ್ತು ಹೊಣೆಗಾರಿಕೆಯನ್ನು ಹೊಂದಿರುವುದಿಲ್ಲ.