Gruhalakshmi Yojane: ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಈ 15 ಜಿಲ್ಲೆಗಳಿಗೆ ಜಮಾ.! ರೂ.2000 ಜಮಾ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.!

Gruhalakshmi Yojane: ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಈ 15 ಜಿಲ್ಲೆಗಳಿಗೆ ಜಮಾ.! ರೂ.2000 ಜಮಾ ಸ್ಟೇಟಸ್ ಚೆಕ್ ಮಾಡಿಕೊಳ್ಳಿ.!

ನಮಸ್ಕಾರ ರಾಜ್ಯದ ಜನತೆಗೆ ಈ ಲೇಖನದ ಮೂಲಕ ತಿಳಿಸುವುದೇನೆಂದರೆ, ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಈ ಜಿಲ್ಲೆಗಳಿಗೆ ಜಮಾ ಆಗುತ್ತದೆ ಎಂಬ ಸುಳಿವು ತಿಳಿದುಬಂದಿದ್ದು ಯಾವ ಜಿಲ್ಲೆಗಳಿಗೆ ಮೊದಲು ಹಣ ಜಮಾ ಆಗಲಿದೆ ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ. ಸಂಪೂರ್ಣವಾದ ಮಾಹಿತಿ ಬೇಕಿದ್ದವರು ಕೊನೆಯವರೆಗೂ ಓದಿ.

ಗೃಹಲಕ್ಷ್ಮಿ ಯೋಜನೆ – Gruhalakshmi Yojane

ಸ್ನೇಹಿತರೆ, ನಿಮಗೆಲ್ಲ ಗೊತ್ತಿರುವ ಹಾಗೆ ಗ್ಯಾರಂಟಿ ಯೋಜನೆಗಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯು ಪ್ರತಿ ತಿಂಗಳು ಕೂಡ ಎರಡು ಸಾವಿರ ರೂಪಾಯಿಯನ್ನು ಇಲ್ಲಿಯವರೆಗೆ 15 ಕಂತುಗಳಾಗಿ ಮಹಿಳೆಯರ ಖಾತೆಗೆ ತಲುಪಿದೆ. ಮಹಿಳೆಯರು ಈ ಯೋಜನೆಯ ಮೂಲಕ ಸುಮಾರು 30,000 ದವರೆಗೆ ಹಣವನ್ನು ಪಡೆದುಕೊಂಡಿದ್ದಾರೆ. 

ಮಹಿಳೆಯರಿಗೆ ಉಪಯುಕ್ತವಾಗಿರುವ ಈ ಯೋಜನೆಯು ಮಹಿಳೆಯರಿಗೆ ದೈನಂದಿನ ಕರ್ಚುಗಳಿಗೆ ಅಥವಾ ಸ್ವಲ್ಪ ಮಟ್ಟಿಗಾದರೂ ಆರ್ಥಿಕ ನೆರವನ್ನು ಉಂಟು ಮಾಡಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಕಾಂಗ್ರೆಸ್ ಸರ್ಕಾರದ ಯೋಜನೆಯಾಗಿರುವಂತಹ ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣವು ಇನ್ನೇನು ಜಮಾ ಆಗುವ ಸ್ಥಿತಿಯಲ್ಲಿದ್ದು ಮೊದಲು ಈ ಕೆಳಗಡೆ ನೀಡಿರುವ ಜಿಲ್ಲೆಗಳಿಗೆ ಜಮಾ ಆಗಲಿದೆ ಎಂಬ ಮಾಹಿತಿಯು ತಿಳಿದು ಬಂದಿದೆ. 

ಈ ಕೆಳಗೆ ಪಟ್ಟಿ ಮಾಡಿರುವಂತಹ ಜಿಲ್ಲೆಗಳಿಗೆ ಮೊದಲ ಹಂತದಲ್ಲಿ ಹಣ ಬಿಡುಗಡೆ ಮಾಡಲಿದ್ದೇವೆ ಎಂದು ತಿಳಿದುಬಂದಿದೆ. ಕೆಳಗೆ ಕೊಟ್ಟಿರುವಂತಹ ಜಿಲ್ಲೆಗಳಲ್ಲಿ ನಿಮ್ಮ ಜಿಲ್ಲೆಯ ಹೆಸರು ಕೂಡ ಇದೆ ಎಂಬುದನ್ನು ತಿಳಿದುಕೊಳ್ಳಿ. ಇಲ್ಲಿದೆ ನೋಡಿ 15 ಜಿಲ್ಲೆಗಳ ಪಟ್ಟಿ.

  • ಮಂಡ್ಯ 
  • ಬಳ್ಳಾರಿ 
  • ಬೀದರ್ 
  • ಗುಲ್ಬರ್ಗ 
  • ವಿಜಯಪುರ 
  • ಗದಗ 
  • ಶಿವಮೊಗ್ಗ 
  • ಚಿಕ್ಕಮಗಳೂರು 
  • ಯಾದಗಿರಿ 
  • ಹಾವೇರಿ 
  • ಕೊಪ್ಪಳ 
  • ಬೆಂಗಳೂರು ನಗರ 
  • ಬೆಂಗಳೂರು ಗ್ರಾಮಾಂತರ 
  • ಬೆಳಗಾವಿ 
  • ಬಾಗಲಕೋಟೆ

ಮೇಲೆ ನೀಡಿರುವಂತಹ ಜಿಲ್ಲೆಗಳಿಗೆ ಮೊದಲನೇ ಹಂತದಲ್ಲಿ ಗೃಹಲಕ್ಷ್ಮಿ ಯೋಜನೆಯ 2000 ರೂಪಾಯಿ ಹಣವನ್ನು ಜಮಾ ಮಾಡಲಾಗುತ್ತದೆ ಎಂಬ ಮಾಹಿತಿ ತಿಳಿದು ಬಂದಿದೆ. ಗೃಹಲಕ್ಷ್ಮಿ ಯೋಜನೆಯ ಹಣವು ಅಂದರೆ 16ನೇ ಕಂತಿನ ಹಣವು ಮಕರ ಸಂಕ್ರಾಂತಿ ಹಬ್ಬಕ್ಕೆ ಜಮಾ ಆಗಬೇಕಿತ್ತು, ಕೆಲವೊಂದು ಕಾರಣಾಂತರಗಳಿಂದ ಇದೀಗ ಮಹಿಳೆಯರಿಗೆ ಹಣ ತಲುಪಲು ಪ್ರಾರಂಭವಾಗುತ್ತದೆ. 

ಹಣ ಚೆಕ್ ಮಾಡಿಕೊಳ್ಳುವುದು ಹೇಗೆ: 

ಗೃಹಲಕ್ಷ್ಮಿ ಯೋಜನೆಯ ಹಣವನ್ನು ನೀವು ಚೆಕ್ ಮಾಡಿಕೊಳ್ಳಬೇಕೆಂದರೆ, ನಿಮ್ಮ ಮೊಬೈಲ್ ನಲ್ಲಿ “ಡಿಬಿಟಿ ಕರ್ನಾಟಕ” ಅಪ್ಲಿಕೇಶನ್ ಅನ್ನು ತೆಗೆದುಕೊಂಡು ಅದರಲ್ಲಿ ಫಲಾನುಭವಿಯ ಸಂಪೂರ್ಣ ವಿವರಗಳನ್ನು ಹಾಕುವ ಮೂಲಕ ಅನ್ನ ಭಾಗ್ಯ ಹಾಗೂ ಗೃಹಲಕ್ಷ್ಮಿ ಯೋಜನೆಯ ಹಣ ಸಂಪೂರ್ಣವಾಗಿ ಚೆಕ್ ಮಾಡಿಕೊಳ್ಳಬಹುದಾಗಿದೆ. ಅಲ್ಲಿ ಪೂರ್ತಿ ಮಾಹಿತಿಯನ್ನು ನೀವು ಪಡೆಯುತ್ತೀರಾ.

WhatsApp Group Join Now
Telegram Group Join Now

Leave a Comment