Gruhalakshmi Scheme: ಗೃಹಲಕ್ಷ್ಮಿ ಯೋಜನೆ 16ನೇ ಮತ್ತು 17ನೇ ಕಂತಿನ ಹಣ ಪಡೆಯಬೇಕಾದರೆ ಹೊಸ ರೂಲ್ಸ್.! ಇಲ್ಲಿದೆ ನೋಡಿ ಮಾಹಿತಿ.!
ನಮಸ್ಕಾರ ಎಲ್ಲರಿಗೂ, ಈ ಲೇಖನದ ಮೂಲಕ ತಿಳಿಸುವುದೇನೆಂದರೆ, ನೀವೇನಾದರೂ ಗೃಹಲಕ್ಷ್ಮಿ ಯೋಜನೆಯ ಮೂಲಕ ಪ್ರತಿ ತಿಂಗಳು ಕೂಡ 2000 ರೂಪಾಯಿ ಹಣವನ್ನು ಪಡೆಯುತ್ತಿದ್ದೀರಾ? ತಪ್ಪದೆ ನೀವು ಈ ರೂಲ್ಸ್ ಗಳನ್ನು ಪಾಲಿಸಬೇಕಾಗುತ್ತದೆ. ಇನ್ನು ಮುಂದೆ ಬರುವಂತಹ 16ನೇ ಮತ್ತು 17ನೇ ಕಂತಿನ ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆದುಕೊಳ್ಳಲು ಈ ರೂಲ್ಸ್ ಗಳನ್ನು ಪಾಲಿಸಬೇಕಾಗುತ್ತದೆ. ಈ ಲೇಖನದಲ್ಲಿ ಪೂರ್ತಿ ಮಾಹಿತಿಯನ್ನು ನೀಡಲಾಗಿದೆ.
ಗೃಹಲಕ್ಷ್ಮಿ ಯೋಜನೆ (Gruhalakshmi Scheme)
ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ರಾಜ್ಯದಲ್ಲಿ ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಪ್ರಾಮುಖ್ಯತೆಯನ್ನು ಪಡೆದಿದ್ದು, ಈ ಯೋಜನೆಯ ಮೂಲಕ ಮಹಿಳೆಯರು ಪ್ರತಿ ತಿಂಗಳು ಕೂಡ 2000 ರೂಪಾಯಿಯನ್ನು ಪಡೆದುಕೊಳ್ಳುತ್ತಾರೆ. ಸುಮಾರು 16ನೇ ಕಂತಿನವರೆಗೆ ಮಹಿಳೆಯರು ಹಣವನ್ನು ಪಡೆದುಕೊಂಡಿದ್ದಾರೆ ಅಂದರೆ 32,000 ಹಣವನ್ನು ಈ ಯೋಜನೆಯಿಂದ ಹಲವಾರು ಮಹಿಳೆಯರು ಪಡೆದುಕೊಂಡಿದ್ದಾರೆ.
ಗೃಹಲಕ್ಷ್ಮಿ ಯೋಜನೆ ಹಣ ಪಡೆಯಲು ಹೊಸ ರೂಲ್ಸ್ ಗಳು.!
ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪಡೆಯಬೇಕೆಂದು ಬಯಸಿದರೆ, ಮಹಿಳೆಯರು ಹಾಗೂ ಪೆಂಡಿಂಗ್ ಇರುವಂತಹ ಎಲ್ಲಾ ಕಂತಿನ ಗೃಹಲಕ್ಷ್ಮಿ ಯೋಜನೆ ಹಣವನ್ನು ಪಡೆದುಕೊಳ್ಳಬೇಕೆಂದು ಬಯಸಿದರೆ, ಇಲ್ಲಿಯವರೆಗೆ ಅಂದರೆ ಹತ್ತು ವರ್ಷಗಳ ಅವಧಿಯ ಒಳಗಾಗಿ ನೀವು ಆಧಾರ್ ಕಾರ್ಡ್ ನಲ್ಲಿ ಯಾವುದೇ ಅಪ್ಡೇಟ್ ಮಾಡಿಸಿಲ್ಲವೆಂದರೆ ಕಡ್ಡಾಯವಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕಾಗುತ್ತದೆ.
ಗೃಹಲಕ್ಷ್ಮಿ ಯೋಜನೆಯ ಹಣ ಪಡೆಯಲು ಬಯಸುವಂತಹ ಮಹಿಳೆಯರು ರೇಷನ್ ಕಾರ್ಡ್ ನಲ್ಲಿ ಇರುವಂತಹ ಕುಟುಂಬದ ಸದಸ್ಯರ E-KYC ಮಾಡಿಸುವುದು ಕಡ್ಡಾಯವಾಗಿದೆ. ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡಿಸುವುದು ಕೂಡ ಮುಖ್ಯವಾದ ಪಾತ್ರವಹಿಸುತ್ತದೆ. ನಿಮ್ಮ ಹತ್ತಿರವಿರುವ ನ್ಯಾಯಬೆಲೆ ಅಂಗಡಿಯಲ್ಲಿ ರೇಷನ್ ಕಾರ್ಡ್ E-KYC ಮಾಡಿಸಿ.
ಗೃಹಲಕ್ಷ್ಮಿ ಯೋಜನೆಯ ಹಣ ಜಮಾ ಆಗೋದೇ ಇರುವಂತಹ ಮಹಿಳೆಯರು ಬ್ಯಾಂಕ್ ಖಾತೆಗೆ ಸಂಬಂಧಿಸಿದ ಹಾಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು. ಹಾಗೂ ಬ್ಯಾಂಕ್ ಖಾತೆಯ E-KYC ಕೂಡ ಮಾಡಿಸಬೇಕು. ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಸೀಡಿಂಗ್ ಮಾಡಿಸುವುದು ಕೂಡ ಕಡ್ಡಾಯವಾಗಿ ಮಾಡಬೇಕಾದ ಕೆಲಸ.
ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಹಾಕಿರುವಂತಹ ಮಹಿಳೆಯರು ಕಡ್ಡಾಯವಾಗಿ ಗೃಹಲಕ್ಷ್ಮಿ ಯೋಜನೆಯ ಅರ್ಜಿಯ E-KYCಯನ್ನು ಮಾಡಿಸಬೇಕು. ಈಗಾಗಲೇ ನೀವು E-KYC ಮಾಡಿಸಿದ್ದರೆ ಮತ್ತೊಮ್ಮೆ ಮಾಡಿಸುವ ಅವಶ್ಯಕತೆ ಇರುವುದಿಲ್ಲ.
ಗೃಹಲಕ್ಷ್ಮಿ 16ನೇ ಕಂತಿನ ಹಣ ಯಾವಾಗ ಜಮಾ.?
ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣಕ್ಕಾಗಿ ಸಾಕಷ್ಟು ಮಹಿಳೆಯರು ಕಾದು ಕುಳಿತಿದ್ದಾರೆ ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣವನ್ನು ಈಗಾಗಲೇ ಜಮಾ ಮಾಡಲು ಪ್ರಾರಂಭ ಮಾಡಲಾಗಿದ್ದು ಪ್ರತಿಯೊಬ್ಬರ ಗಾದೆಗೆ ಹಣ ಜಮಾ ಆಗಲು ಐದರಿಂದ ಆರು ದಿನಗಳ ಕಾಲಾವಕಾಶ ತೆಗೆದುಕೊಳ್ಳಬಹುದು ಹಾಗಾಗಿ ಮಹಿಳೆಯರು ಜಮಾ ಆಗುವವರೆಗೂ ಕಾಯಬೇಕು.