Bank of Baroda Loan: ಕಡಿಮೆ ಬಡ್ಡಿ ದರದಲ್ಲಿ 15 ಲಕ್ಷದವರೆಗೆ ವೈಯಕ್ತಿಕ ಸಾಲ ಸಿಗುತ್ತೆ.! ಬ್ಯಾಂಕ್ ಆಫ್ ಬರೋಡ ವೈಯಕ್ತಿಕ ಸಾಲ.!
ನಮಸ್ಕಾರ ಎಲ್ಲರಿಗೂ ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ವಿಷಯವೆಂದರೆ, ಬ್ಯಾಂಕ್ ಆಫ್ ಬರೋಡ ಮೂಲಕ ನಿಮ್ಮ ಅಗತ್ಯತೆಗಳಿಗೆ ಅನುಗುಣವಾಗಿ ಅಂದರೆ ತುರ್ತು ಸಂದರ್ಭಗಳಿಗೆ ಯಾರು ಹಣ ನೀಡದಿದ್ದಾಗ ನೀವು ಬ್ಯಾಂಕ್ ಮೂಲಕ ಸಾಲ ಪಡೆಯಬೇಕೆಂದು ಬಯಸಿದರೆ ಈ ಬ್ಯಾಂಕ್ ಮೂಲಕ ನೀವು 15 ಲಕ್ಷ ದವರೆಗೆ ಸಾಲ ಪಡೆಯಬಹುದಾಗಿದೆ.
ಈ ಲೇಖನದಲ್ಲಿ ಬ್ಯಾಂಕ್ ಆಫ್ ಬರೋಡ ಮೂಲಕ ಸಾಲವನ್ನು ಪಡೆಯುವುದು ಯಾವ ರೀತಿ ಎಂಬುವುದರ ಬಗ್ಗೆ ತಿಳಿಸಿಕೊಡಲಾಗಿರುತ್ತದೆ. ಈ ಲೇಖನದಲ್ಲಿ ಬ್ಯಾಂಕ್ ಆಫ್ ಬರೋಡ ಮೂಲಕ ಸಾಲ ಪಡೆಯಲು ಯಾವ ದಾಖಲೆಗಳು ಬೇಕು ಮತ್ತು ಯಾವ ಅರ್ಹತೆಗಳಿರಬೇಕು ಎಂಬುವುದರ ಮಾಹಿತಿಯನ್ನು ನೀಡಲಾಗಿರುತ್ತದೆ.
ಸಾಲ ಪಡೆಯಲು ಇರಬೇಕಾದ ಅರ್ಹತೆಗಳು:
ಬ್ಯಾಂಕ್ ಆಫ್ ಬರೋಡ ಮೂಲಕ ಸಾಲ ಪಡೆಯಲು ಬಯಸುವಂತಹ ವ್ಯಕ್ತಿಯ ವಯಸ್ಸು 21 ವರ್ಷ ಮೇಲ್ಪಟ್ಟಿರಬೇಕು. ಹಾಗೂ 58 ವರ್ಷ ಮೀರಿರಬಾರದು.
ಪೂರ್ಣ ಸಮಯದ ಉದ್ಯೋಗಿ ಅಥವಾ ಸ್ವಯಂ ಉದ್ಯೋಗಿಯಾಗಿದ್ದರೆ ಬ್ಯಾಂಕ್ ಆಫ್ ಬರೋಡ ಮೂಲಕ ಸಾಲ ಪಡೆಯಲು ಅರ್ಹರು.
ಮಾಸಿಕ ಆದಾಯವನ್ನು ಗಳಿಸುವಂತಹ ಅಥವಾ ಸಂಬಳವನ್ನು ಪಡೆಯುವಂತಹ ವ್ಯಕ್ತಿಯು ಬ್ಯಾಂಕ್ ಆಫ್ ಬರೋಡ ಮೂಲಕ ಸಾಲ ಪಡೆಯಲು ಅರ್ಹನಾಗಿರುತ್ತಾನೆ.
ಉತ್ತಮವಾದ ಸಿಬಿಲ್ ಸ್ಕೋರ್ ಅಥವಾ ಕ್ರೆಡಿಟ್ ಸ್ಕೋರ್ 750ಕ್ಕಿಂತ ಹೆಚ್ಚಿನ ಕ್ರೆಡಿಟ್ ಸ್ಕೋರನ್ನು ಹೊಂದಿರುವ ವ್ಯಕ್ತಿಗೆ ಸಾಲ ಸಾಮಾನ್ಯವಾಗಿ ಸಿಗುತ್ತದೆ.
ಸಾಲವನ್ನು ಪಡೆಯಲು ಬಯಸುವಂತಹ ವ್ಯಕ್ತಿಯು ಬ್ಯಾಂಕ್ ಆಫ್ ಬರೋಡ ಬ್ಯಾಂಕಿನ ನಿಯಮಗಳು ಮತ್ತು ಶರತ್ತುಗಳಿಗೆ ಬದ್ಧನಾಗಿರಬೇಕು.
ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ಆದಾಯದ ಪುರಾವೆ
- ಸಂಬಳದ ಪುರಾವೆ
- ನಿವಾಸದ ಪುರಾವೆ
- ಬ್ಯಾಂಕ್ ಸ್ಟೇಟ್ಮೆಂಟ್
- ಪಾನ್ ಕಾರ್ಡ್
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ಸಹಿ
- ಆದಾಯ ತೆರಿಗೆ ರಿಟರ್ನ್
ಮೇಲೆ ನೀಡಿರುವ ದಾಖಲೆಗಳನ್ನು ನೀವು ಬ್ಯಾಂಕ್ ಆಫ್ ಬರೋಡ ಮೂಲಕ ವೈಯಕ್ತಿಕ ಸಾಲ ಪಡೆಯಲು ನೀಡಬೇಕಾಗುತ್ತದೆ. ಸಾಲದ ಮೇಲಿನ ಬಡ್ಡಿ ದರವನ್ನು ನೀವು ಈ ಕೆಳಗಡೆ ಕಾಣಬಹುದಾಗಿದೆ.
ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರ:
ವೈಯಕ್ತಿಕ ಸಾಲದ ಮೇಲಿನ ಬಡ್ಡಿ ದರಗಳು ಕಾಲಕಾಲಕ್ಕೆ ಬದಲಾಗುತ್ತಾ ಇರುತ್ತವೆ. ಆದ್ದರಿಂದ ನೀವು ಬ್ಯಾಂಕಿನ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ಪ್ರಸ್ತುತ ಬಡ್ಡಿ ದರವನ್ನು ತಿಳಿದುಕೊಳ್ಳಬಹುದಾಗಿದೆ. ನಿಖರವಾದ ಬಡ್ಡಿ ದರವನ್ನು ನೀವು ತಿಳಿಯಬೇಕೆಂದು ಬಯಸಿದರೆ ನಿಮ್ಮ ಹತ್ತಿರವಿರುವಂತಹ ಬ್ಯಾಂಕ್ ಆಫ್ ಬರೋಡ ಶಾಖೆಗೆ ಭೇಟಿ ನೀಡಿರಿ. ಸಾಲದ ಅವಧಿ ನೀವು ಬ್ಯಾಂಕ್ ಮೂಲಕ ಕೇಳಿ ಪಡೆದುಕೊಳ್ಳಬಹುದಾಗಿದೆ.
ಸಾಮಾನ್ಯವಾಗಿ ಬ್ಯಾಂಕ್ ಆಫ್ ಬರೋಡದಿಂದ ವೈಯಕ್ತಿಕ ಸಾಲ ಪಡೆಯಲು ಬಯಸುವಂತಹ ವ್ಯಕ್ತಿಗಳಿಗೆ ಬಡ್ಡಿದರವನ್ನು 11.15% ನಿಂದ ಹಿಡಿದು 18.75% ವರೆಗೆ ವಿಧಿಸಬಹುದಾಗಿದೆ. ಇನ್ನಷ್ಟು ಹೆಚ್ಚಿನ ಮಾಹಿತಿಗಳಿಗಾಗಿ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಅಥವಾ ನಿಮ್ಮ ಹತ್ತಿರವಿರುವ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.