Axis bank personal loan: ಎಕ್ಸಿಸ್ ಬ್ಯಾಂಕ್ ಮೂಲಕ 40 ಲಕ್ಷದವರೆಗೆ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲ ಸೌಲಭ್ಯ.! ಇಲ್ಲಿದೆ ಸಂಪೂರ್ಣವಾದ ಮಾಹಿತಿ.!
ನಮಸ್ಕಾರ ಎಲ್ಲಾ ಸ್ನೇಹಿತರಿಗೂ, ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವ ವಿಷಯವೇನೆಂದರೆ, ಎಕ್ಸಿಸ್ ಬ್ಯಾಂಕ್ ಮೂಲಕ 40 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಬೇಕೆಂದು ಬಯಸುವಂಥವರು ಯಾವ ರೀತಿ ಸಾಲಕ್ಕೆ ಅರ್ಜಿ ಸಲ್ಲಿಸಬೇಕು ಮತ್ತು ಸಾಲದ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಈ ಲೇಖನದಲ್ಲಿ ನೀವು ಪಡೆಯುತ್ತೀರಾ. ಆದಕಾರಣ ಎಕ್ಸಿಸ್ ಬ್ಯಾಂಕ್ ಮೂಲಕ ಸಾಲ ಪಡೆಯಲು ಬಯಸುವಂತಹ ಅಭ್ಯರ್ಥಿಗಳು ಲೇಖನವನ್ನು ಕೊನೆಯವರೆಗೂ ಓದಿ.
ಗೃಹಲಕ್ಷ್ಮಿ 16ನೇ ಕಂತಿನ ಹಣ ಈ ದಿನದಂದು ಜಮಾ.! ರೂ.2000 ಹಣ ಜಮಾ.!
ನಿಮಗೆ ಅವಶ್ಯಕತೆ ಇದ್ದರೆ 40 ಲಕ್ಷದವರೆಗೆ ಎಕ್ಸಿಸ್ ಬ್ಯಾಂಕ್ ಮೂಲಕ ಕಡಿಮೆ ಬಡ್ಡಿ ದರದಲ್ಲಿ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿದೆ. ಎಕ್ಸಿಸ್ ಬ್ಯಾಂಕ್ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಅಗತ್ಯ ಬೀಳುತ್ತವೆ ಎಂಬ ಮಾಹಿತಿಯನ್ನು ನೀವು ತಿಳಿದುಕೊಳ್ಳಬೇಕಾಗುತ್ತದೆ. ಎಕ್ಸಿಸ್ ಬ್ಯಾಂಕ್ ಮೂಲಕ ನೀವು ಸಾಲವನ್ನು ಪಡೆಯಬೇಕೆಂದು ಬಯಸಿದಲ್ಲಿ ಯಾವೆಲ್ಲ ಅರ್ಹತೆಗಳನ್ನು ನೀವು ಹೊಂದಿರಬೇಕು ಎಂಬ ಮಾಹಿತಿಯನ್ನು ತಿಳಿದುಕೊಳ್ಳಿ.
ಎಕ್ಸಿಸ್ ಬ್ಯಾಂಕ್ ವೈಯಕ್ತಿಕ ಸಾಲ (Axis bank personal loan)
ನೀವು ಕೂಡ ಎಕ್ಸಿಸ್ ಬ್ಯಾಂಕ್ (Axis bank personal loan) ಮೂಲಕ ಸಾಲವನ್ನು ಪಡೆಯಬೇಕೆಂದು ಬಯಸಿದರೆ ಈ ಮಾಹಿತಿಯನ್ನು ಓದಿ. ಎಕ್ಸಿಸ್ ಬ್ಯಾಂಕ್ ಒಂದು ಪ್ರೈವೇಟ್ ಬ್ಯಾಂಕ್ ಆಗಿದ್ದು ದೇಶದಲ್ಲಿ ಹಲವಾರು ಗ್ರಾಹಕರನ್ನು ಹೊಂದಿದೆ. ಹಣದ ಅವಶ್ಯಕತೆ ಇರುವಂತಹ ಸಂಬಳ ಪಡೆಯುವ ಅಥವಾ ಆದಾಯವನ್ನು ಹೊಂದಿರುವಂತಹ ವ್ಯಕ್ತಿಗಳಿಗೆ ವೈಯಕ್ತಿಕ ಸಾಲವನ್ನು ಈ ಬ್ಯಾಂಕ್ ಮೂಲಕ ಪಡೆಯಲು ಅವಕಾಶವಿದೆ.
ಈ ಯೋಜನೆಗೆ ಅರ್ಜಿ ಸಲ್ಲಿಸಿ 85,000 ವರೆಗೆ ಹಣ ಪಡೆಯಬಹುದು ಹಾಗೂ 300 ಯೂನಿಟ್ ಉಚಿತ ವಿದ್ಯುತ್ ಸಿಗುತ್ತೆ
ನೀವು ಈ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಬೇಕಾ? ಬಡ್ಡಿ ದರವನ್ನು ಎಷ್ಟರ ಮಟ್ಟಿಗೆ ವಿಧಿಸಲಾಗುತ್ತದೆ? ಸಂಸ್ಕರಣ ಶುಲ್ಕ ಎಷ್ಟು ಇರುತ್ತದೆ? ಸಾಲದ ಅನುಮೋದನೆಗಾಗಿ ಎಷ್ಟು ಸಮಯ ಕಾಯಬೇಕು? ಯಾವೆಲ್ಲ ಹಂತಗಳನ್ನು ನೀವು ಸಾಲವನ್ನು ಪಡೆಯಲು ಅಥವಾ ಸಾಲಕ್ಕೆ ಅರ್ಜಿ ಸಲ್ಲಿಸಲು ಪಾಲಿಸಬೇಕು ಎಂಬ ನಿಮ್ಮ ಸಕಲ ಗೊಂದಲಗಳಿಗೆ ಈ ಲೇಖನದಲ್ಲಿ ಉತ್ತರ ನೀಡಲಾಗಿದೆ.
ಎಕ್ಸಿಸ್ ಬ್ಯಾಂಕ್ ವೈಯಕ್ತಿಕ ಸಾಲದ ವಿವರಗಳು (Axis bank personal loan)
ಆಕ್ಸಿಸ್ ಬ್ಯಾಂಕ್ (Axis bank personal loan) ನೀಡುತ್ತಿರುವ ಗರಿಷ್ಠ 40 ಲಕ್ಷದವರೆಗೆ ವೈಯಕ್ತಿಕ ಸಾಲದ ಮೇಲೆ 10.95% ನಿಂದ 21% ವರೆಗೆ ಬಡ್ಡಿ ದರವನ್ನು ವಿಧಿಸುವ ಸಾಧ್ಯತೆ ಇರುತ್ತದೆ. ನಿಖರವಾದ ಮಾಹಿತಿಗಾಗಿ ನಿಮ್ಮ ಹತ್ತಿರವಿರುವ ಎಕ್ಸಿಸ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿ. ಸಾಲದ ಮೇಲಿನ ಬಡ್ಡಿ ದರವು ಗ್ರಾಹಕರ ಸಿಬಿಲ್ ಸ್ಕೋರ್ (CIBIL Score) ಆಧಾರದ ಮೇಲೆ ನಿರ್ಧಾರವಾಗುತ್ತದೆ.
ಆಕ್ಸಿಸ್ ಬ್ಯಾಂಕ್ ನಲ್ಲಿ ಗರಿಷ್ಠ 84 ತಿಂಗಳುಗಳವರೆಗೆ ಮರುಪಾವತಿ ಅವಧಿಯನ್ನು ವಿಸ್ತರಿಸಬಹುದಾಗಿದೆ. ಸಾಲದ ಮೇಲಿನ ಸಂಸ್ಕರಣ ಶುಲ್ಕ ಅಂದರೆ ಸಾಲದ ಮೊತ್ತದ 2% ನಷ್ಟು ಸಂಸ್ಕರಣ ಶುಲ್ಕವನ್ನು ವಿಧಿಸಬಹುದಾಗಿದೆ. ವೈಯಕ್ತಿಕ ಸಾಲಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಗಳನ್ನು ನಿಮ್ಮ ಹತ್ತಿರ ಬರುವ ಎಕ್ಸಿಸ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಪಡೆಯಬಹುದಾಗಿದೆ.
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು.
- ಆಧಾರ್ ಕಾರ್ಡ್
- ಬ್ಯಾಂಕ್ ಅಕೌಂಟ್ ಡೀಟೇಲ್ಸ್
- ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಪಾನ್ ಕಾರ್ಡ್
- ಗುರುತಿನ ಪುರಾವೆ
- ಆದಾಯ ಮೂಲದ ವಿವರಗಳು
- ಸ್ಯಾಲರಿ ಸ್ಲಿಪ್
- ಮೊಬೈಲ್ ನಂಬರ್
- ಪಾಸ್ ಪೋರ್ಟ್ ಸೈಜ್ ಫೋಟೋಗಳು
- ಇನ್ನಿತರ ಪ್ರಮುಖ ದಾಖಲೆಗಳು
ನೀವು ಎಕ್ಸಿಸ್ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಬಯಸಿದರೆ ಮೇಲೆ ನೀಡಿರುವ ದಾಖಲೆಗಳನ್ನು ಒದಗಿಸಬೇಕಾಗುತ್ತದೆ. ಹಾಗೂ ನಿಮ್ಮ ಬ್ಯಾಂಕಿನಲ್ಲಿ ನೀವು ಹೆಚ್ಚಿನ ವಿವರಗಳನ್ನು ಪಡೆದ ನಂತರ ಕೇಳಲಾಗುವ ಇನ್ನಿತರ ಪ್ರಮುಖ ದಾಖಲೆಗಳನ್ನು ಕೂಡ ನೀವು ಒದಗಿಸಬೇಕಾಗುತ್ತದೆ. ಎಕ್ಸಿಸ್ ಬ್ಯಾಂಕ್ ಮೂಲಕ ಸಾಲವನ್ನು ಪಡೆಯಲು ಯಾವೆಲ್ಲ ಅರ್ಹತೆಗಳಿರಬೇಕೆಂಬುದನ್ನು ನಿಮ್ಮ ಹತ್ತಿರದ ಆಕ್ಸಿಸ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ತಿಳಿದುಕೊಳ್ಳಿ.
ಸಾಲಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? (Axis bank personal loan)
ನೀವೇನಾದರೂ ಎಕ್ಸಿಸ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಸಾಲಕ್ಕೆ ಅರ್ಜಿ ಸಲ್ಲಿಸಬೇಕೆಂದು ಬಯಸಿದರೆ ಅಗತ್ಯ ದಾಖಲೆಗಳನ್ನು ತೆಗೆದುಕೊಂಡು ನಿಮ್ಮ ಹತ್ತಿರ ಬರುವಂತಹ ಆಕ್ಸಿಸ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಲ್ಲಿರುವಂತಹ ಆಫೀಸರ್ ಗಳ ಮೂಲಕ ಹೆಚ್ಚಿನ ಮಾಹಿತಿಯನ್ನು ಪಡೆಯುವ ಮೂಲಕ ಆಫ್ ಲೈನ್ ಮುಖಾಂತರ ಎಕ್ಸಿಸ್ ಬ್ಯಾಂಕ್ ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.
ಅಥವಾ ನೀವು ಎಕ್ಸಿಸ್ ಬ್ಯಾಂಕ್ ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಿ ವೈಯಕ್ತಿಕ ಸಾಲದ ವಿಭಾಗಕ್ಕೆ ಭೇಟಿ ನೀಡಿ ಆನ್ಲೈನ್ ಮೂಲಕವೂ ಕೂಡ ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡುವ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆಯಲ್ಲಿ ಕೆವೈಸಿ ಸಂಬಂಧಿಸಿದ ಹಂತಗಳನ್ನು ಪಾಲಿಸಬೇಕಾಗುತ್ತದೆ. ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರವಿರುವ ಆಕ್ಸಿಸ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿ.
ಓದುಗರ ಗಮನಕ್ಕೆ: ಎಕ್ಸಿಸ್ ಬ್ಯಾಂಕ್ ಮೂಲಕ ನೀವು 40 ಲಕ್ಷದವರೆಗೆ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ನಿಮ್ಮ ಹತ್ತಿರವಿರುವಂತಹ ಆಕ್ಸಿಸ್ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಸಂಪೂರ್ಣ ವಿವರಗಳನ್ನು ಪಡೆದ ನಂತರವೇ ಹಾಗೂ ಸಾಲಕ್ಕೆ ನೀಡುವಂತಹ ನಿಯಮಗಳು ಮತ್ತು ಶರತ್ತುಗಳನ್ನು ಪೂರ್ಣವಾಗಿ ಓದಿದ ನಂತರ ನಿಮ್ಮ ಒಪ್ಪಿಗೆ ಹಾಕಿದ ನಂತರವೇ ಸಾಲವನ್ನು ಪಡೆಯುವುದು ಸೂಕ್ತ ವಿಚಾರ. ಈ ಸಾಲದ ವಿಚಾರವಾಗಿ “ಕರ್ನಾಟಕ ವಿಜಯ” ಜಾಲತಾಣದ ಹೊಣೆಗಾರಿಕೆ ಮತ್ತು ಪಾಲುದಾರಿಕೆ ಇರುವುದಿಲ್ಲ.