SBI Home Loan: 45 ಲಕ್ಷದವರೆಗೆ ಎಸ್ಬಿಐ ಗೃಹ ಸಾಲ ಸಿಗುತ್ತೆ.! ಎಷ್ಟು EMI ಬರುತ್ತೆ.? ಇಲ್ಲಿದೆ ಮಾಹಿತಿ.
ನಮಸ್ಕಾರ ಎಲ್ಲರಿಗೂ, ದೇಶದ ಅತಿ ದೊಡ್ಡ ಬ್ಯಾಂಕ್ ಎನಿಸಿಕೊಂಡಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಸ್ವಂತ ಮನೆ ಕಟ್ಟಿಸಲು ಹಾಗೂ ಸ್ವಂತ ಮನೆ ಕಟ್ಟಿಸಲು ಕನಸು ಹೊಂದಿರುವಂತಹ ಗ್ರಾಹಕರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಆ ಕನಸನ್ನು ನನಸು ಮಾಡಲು ಹೊರಟಿದೆ. ಏಕೆಂದರೆ 45 ಲಕ್ಷದವರೆಗೆ ಗೃಹ ಸಾಲವನ್ನು ಕಡಿಮೆ ಬಡ್ಡಿ ದರದಲ್ಲಿ ಎಸ್ ಬಿ ಐ ಬ್ಯಾಂಕ್ ಮೂಲಕ ಪಡೆಯಬಹುದಾಗಿರುತ್ತದೆ.
ಎಸ್ಬಿಐ ಗೃಹ ಸಾಲ (SBI Home Loan)
ಸ್ವಂತ ಮನೆ ಕಟ್ಟಿಸಿಕೊಳ್ಳಬೇಕೆಂದು ಬಯಸುವವರಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಗುಡ್ ನ್ಯೂಸ್ ಎಂದೆ ಹೇಳಬಹುದು.! ಯಾಕೆಂದರೆ, ಅತ್ಯಂತ ಕಡಿಮೆ ಬಡ್ಡಿ ದರದಲ್ಲಿ ಈ ಬ್ಯಾಂಕ್ ಮೂಲಕ ನೀವು ಗೃಹ ಸಾಲವನ್ನು ಪಡೆಯಬಹುದಾಗಿರುತ್ತದೆ. ಸಾಲ ಪಡೆಯಲು ಬಯಸಿದರೆ ಯಾವ ಅರ್ಹತೆಗಳನ್ನು ಹೊಂದಿರಬೇಕು? ಮತ್ತು ಎಷ್ಟರ ಬಡ್ಡಿ ದರವನ್ನು ನೀಡಲಾಗುತ್ತದೆ? ಎಂಬ ಮಾಹಿತಿಯನ್ನು ಈ ಲೇಖನದಲ್ಲಿ ನೀವು ತಿಳಿದುಕೊಳ್ಳುತ್ತೀರಾ.
ಗೃಹ ಸಾಲ ಪಡೆಯಲು ಅರ್ಹತೆಗಳು:
1). ಎಸ್ ಬಿ ಐ ಬ್ಯಾಂಕ್ ಮೂಲಕ ಗೃಹ ಸಾಲ ಪಡೆಯಲು ಬಯಸುವಂತಹ ವ್ಯಕ್ತಿಯ ಸಿಬಿಲ್ ಸ್ಕೋರ್ ಉತ್ತಮವಾಗಿರಬೇಕು ಎಂದು ತಿಳಿಸಲಾಗಿದೆ.
2). ಗೃಹ ಸಾಲ ಪಡೆಯಲು ಬಯಸುವ ವ್ಯಕ್ತಿಯು ಸರಕಾರಿ ಅಥವಾ ಖಾಸಗಿ ಉದ್ಯೋಗದಲ್ಲಿ ತೊಡಗಿರಬೇಕು ಅಥವಾ ಸ್ವಂತ ವ್ಯಾಪಾರ ಹೊಂದಿರಬೇಕು.
3). ತಿಂಗಳಿಗೆ ಕನಿಷ್ಠ 30000 ಸಂಬಳ ತರುವ ಉದ್ಯೋಗಿಗಳಿಗೆ ಹಾಗೂ ವ್ಯಾಪಾರದಲ್ಲಿ ತೊಡಗಿರುವಂತವರಿಗೆ ಗೃಹ ಸಾಲ ಸಿಗುತ್ತದೆ.
4). ಸಾಲ ಪಡೆಯಲು ಬಯಸುವ ವ್ಯಕ್ತಿಯ ಎಲ್ಲಾ ದಾಖಲೆಗಳು ಸರಿಯಾಗಿರಬೇಕು.
5). ಸಾಲ ತೀರಿಸಲಾಗದೆ ಯಾವುದೇ ಬ್ಯಾಂಕಿನಿಂದ ಈ ಹಿಂದೆ ಸಾಲ ಪಡೆದು ಬ್ಯಾಂಕ್ ಅಂಥವರನ್ನು ಬ್ಯಾನ್ ಮಾಡಿರಬಾರದು. ಅಂತವರಿಗೆ ಸಾಲ ಸಿಗುವುದಿಲ್ಲ.
ನೀವೇನಾದರೂ SBI ಬ್ಯಾಂಕ್ ಮೂಲಕ ಗೃಹ ಸಾಲ ಪಡೆಯಲು ಬಯಸಿದರೆ, ಉತ್ತಮವಾದ ಸಿಬಿಲ್ ಸ್ಕೋರನ್ನು ಹೊಂದಿರಬೇಕಾಗಿದೆ. ಸಾಮಾನ್ಯವಾಗಿ 800 ಕ್ಕಿಂತ ಹೆಚ್ಚು ಸಿಬಿಲ್ ಸ್ಕೋರ್ ಹೊಂದಿದವರಿಗೆ 9.15% ರಿಂದ ಪ್ರಾರಂಭವಾಗುವ ಬಡ್ಡಿದರದಲ್ಲಿ ಸಾಲ ಸಿಗುತ್ತದೆ. ಬಡ್ಡಿ ದರದ ಬಗ್ಗೆ ಇನ್ನಷ್ಟು ಹೆಚ್ಚಿನ ವಿವರಗಳನ್ನು ಪಡೆಯಬೇಕೆಂದರೆ ನಿಮ್ಮ ಹತ್ತಿರವಿರುವಂತಹ ಎಸ್ ಬಿ ಐ ಬ್ಯಾಂಕ್ ಶಾಖೆಗೆ ಭೇಟಿ ನೀಡಿರಿ.
ಸಾಲ ಪಡೆಯುವುದು ಹೇಗೆ.? (SBI Home Loan)
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ನೀವು ಗೃಹ ಸಾಲವನ್ನು ಪಡೆಯಲು ಬಯಸಿದರೆ ನಿಮ್ಮ ಹತ್ತಿರವಿರುವಂತಹ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಲು ಅಗತ್ಯ ದಾಖಲೆಗಳನ್ನು ನೀಡಿ ಮತ್ತು ಅರ್ಹರಾಗಿದ್ದರೆ ನಿಮ್ಮ ಅರ್ಜಿಯನ್ನು ಸ್ವೀಕಾರ ಮಾಡಲಾಗುತ್ತದೆ. ಹೆಚ್ಚಿನ ವಿವರಕ್ಕಾಗಿ ನಿಮ್ಮ ಹತ್ತಿರವಿರುವ ಎಸ್ಬಿಐ ಬ್ಯಾಂಕ್ ಶಾಖೆಗೆ ಭೇಟಿ ನೀಡಿರಿ. EMI ಮತ್ತು ಬಡ್ಡಿ ದರಗಳ ವಿವರಗಳನ್ನು ನಿಮ್ಮ ಹತ್ತಿರವಿರುವ ಬ್ಯಾಂಕ್ ಶಾಖೆಯಲ್ಲಿ ಕೇಳಿ ಪಡೆಯಿರಿ.
ಓದುಗರ ಗಮನಕ್ಕೆ: ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮೂಲಕ ಗೃಹ ಸಾಲವನ್ನು ಪಡೆಯಲು ಬಯಸಿದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೀಡುವ ನಿಯಮಗಳು ಮತ್ತು ಶರತ್ತುಗಳಿಗೆ ಸಂಪೂರ್ಣವಾಗಿ ಓದಿದ ನಂತರ ಒಪ್ಪಿಗೆ ಹಾಕಿದ ನಂತರವೇ ಸಾಲವನ್ನು ತೆಗೆದುಕೊಳ್ಳಿ. ಇದಕ್ಕೆ ಕರ್ನಾಟಕ ವಿಜಯ ಜಾಲತಾಣದ ಹೊಣೆಗಾರಿಕೆ ಮತ್ತು ಪಾಲುದಾರಿಕೆ ಇರುವುದಿಲ್ಲ.