Karnataka Bank Loan: ಕರ್ನಾಟಕ ಬ್ಯಾಂಕ್ ಮೂಲಕ 10 ಲಕ್ಷದವರೆಗೆ ವೈಯಕ್ತಿಕ ಸಾಲ ಪಡೆಯಬಹುದು.! ಇಲ್ಲಿದೆ ಮಾಹಿತಿ.!
ಈ ಲೇಖನದ ಮೂಲಕ ರಾಜ್ಯದ ಸಮಸ್ತ ಜನತೆಗೆ ತಿಳಿಸುವುದೇನೆಂದರೆ, ನೀವು ಕರ್ನಾಟಕ ಬ್ಯಾಂಕ್ ಮೂಲಕ 10 ಲಕ್ಷ ರೂಪಾಯಿಯವರೆಗೆ ವೈಯಕ್ತಿಕ ಸಾಲ ಪಡೆಯಬಹುದಾಗಿರುತ್ತದೆ ಕರ್ನಾಟಕ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸಿದರೆ ಯಾವೆಲ್ಲ ಅರ್ಹತೆಗಳನ್ನು ನೀವು ಹೊಂದಿರಬೇಕು ಮತ್ತು ಯಾವೆಲ್ಲ ದಾಖಲೆಗಳನ್ನು ಒದಗಿಸಬೇಕಾಗುತ್ತದೆ ಎಂಬ ಎಲ್ಲಾ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಉತ್ತರಿಸಲಾಗಿದೆ.
ಕರ್ನಾಟಕ ಬ್ಯಾಂಕ್ ವೈಯಕ್ತಿಕ ಸಾಲ (Karnataka Bank Loan)
ನೀವು ಕರ್ನಾಟಕ ಬ್ಯಾಂಕ್ನಿಂದ ಸುಮಾರು 10 ಲಕ್ಷ ರೂಪಾಯಿವರೆಗೆ ವೈಯಕ್ತಿಕ ಸಾಲ ಪಡೆಯಬಹುದಾಗಿದೆ ಹಣಕಾಸಿನ ತುರ್ತು ಸಂದರ್ಭಗಳಲ್ಲಿ ಹಣ ಅವಶ್ಯಕತೆ ಇದ್ದಂತಹ ಸಂದರ್ಭದಲ್ಲಿ ನೀವು ಕರ್ನಾಟಕ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಬಹುದಾಗಿರುತ್ತದೆ. ಕರ್ನಾಟಕ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲ ಪಡೆಯಲು ಬಯಸಿದರೆ ಯಾವ ದಾಖಲೆಗಳನ್ನು ನೀವು ನೀಡಬೇಕಾಗುತ್ತದೆ ಮತ್ತು ಹೊಂದಿರಬೇಕಾಗುತ್ತದೆ? ಎಲ್ಲಿದೆ ನೋಡಿ ಮಾಹಿತಿ.
ಸಾಲ ಪಡೆಯಲು ಅರ್ಹತೆಗಳು
- ಸಾಲ ಪಡೆಯಲು ಬಯಸುವ ವ್ಯಕ್ತಿಯು 18 ವರ್ಷ ಮೇಲ್ಪಟ್ಟಿರಬೇಕು.
- ಕರ್ನಾಟಕ ಬ್ಯಾಂಕ್ ಮೂಲಕ ಸಾಲ ಪಡೆಯಲು ಬಯಸುವಂತಹ ವ್ಯಕ್ತಿಯು ಭಾರತದ ಕಾಯಂ ನಿವಾಸಿ ಆಗಿರಬೇಕು.
- ನೀವೇನಾದರೂ ಕರ್ನಾಟಕ ಬ್ಯಾಂಕ್ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ಕನಿಷ್ಠ 10 ಸಾವಿರ ರೂಪಾಯಿ ಮಾಸಿಕ ಆದಾಯವನ್ನು ಹೊಂದಿರಬೇಕು.
- ಉದ್ಯಮಗಳಲ್ಲಿ ಹಾಗೂ ಸ್ವಯಂ ಉದ್ಯೋಗಿಗಳಿಗೆ ಕನಿಷ್ಠ 1,20,000 ವಾರ್ಷಿಕ ಆದಾಯವಿರಬೇಕು.
- 700 ಅಥವಾ ಇದಕ್ಕಿಂತ ಹೆಚ್ಚಿನ ಸಿಬಿಲ್ ಸ್ಕೋರ್ ಇದ್ದವರಿಗೆ ಸಾಲ ಪಡೆಯಲು ಅವಕಾಶವಿರುತ್ತದೆ.
ಬೇಕಾಗುವ ದಾಖಲೆಗಳು
- ಆಧಾರ್ ಕಾರ್ಡ್
- ಪಾನ್ ಕಾರ್ಡ್
- ಆರು ತಿಂಗಳ ಬ್ಯಾಂಕ್ ಸ್ಟೇಟ್ಮೆಂಟ್
- ಪಾಸ್ ಪೋರ್ಟ್ ಅಳತೆಯ ಭಾವಚಿತ್ರ
- ವಿಳಾಸದ ಪುರಾವೆ
- ಇನ್ನಿತರ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವುದು ಹೇಗೆ? (Karnataka Bank Loan)
ಕರ್ನಾಟಕ ಬ್ಯಾಂಕ್ ಮೂಲಕ ನೀವು ವೈಯಕ್ತಿಕ ಸಾಲಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ ಈ ಕೆಳಗೆ ನೀಡಿರುವ ಜಾಲತಾಣವನ್ನು ಬಳಸಿ ಅರ್ಜಿ ಸಲ್ಲಿಸಬಹುದಾಗಿದೆ. ವಾರ್ಷಿಕವಾಗಿ 12% ನಷ್ಟು ಬಡ್ಡಿದರವನ್ನು 10 ಲಕ್ಷ ರೂಪಾಯಿಗಳ ಮೇಲೆ ಸಾಲವನ್ನು ಪಡೆಯುವಾಗ ವಿಧಿಸಬಹುದಾಗಿದೆ.
ಮೇಲೆ ನೀಡಿರುವ ಜಾಲತಾಣವನಾದರೂ ಕೂಡ ನೀವು ಬಳಸಿ ಪರ್ಸನಲ್ ಲೋನ್ ಗೆ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಹತ್ತಿರವಿರುವ ಕರ್ನಾಟಕ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ನೀಡುವ ಮೂಲಕ ಆಫ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು. ನೆನಪಿರಲಿ ಸಾಲ ಪಡೆಯುವಾಗ ನಿಯಮಗಳು ಮತ್ತು ಷರತ್ತುಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ. ಸಾಲಕ್ಕೆ ಕರ್ನಾಟಕ ವಿಜಯ ಜಾಲತಾಣದ ಹೊಣೆಗಾರಿಕೆ ಮತ್ತು ಪಾಲುದಾರಿಕೆ ಇರುವುದಿಲ್ಲ.