200 Notes News: 200 ರೂಪಾಯಿ ನೋಟು ಬಂದ್ ಆಗುತ್ತಾ.? ಇದಕ್ಕೆ ಆರ್‌ಬಿಐ ಉತ್ತರ ಏನು.? ಇಲ್ಲಿದೆ ಮಾಹಿತಿ.!
ನಮಸ್ಕಾರ ಎಲ್ಲರಿಗೂ, ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಹಾಗೆ 200 ರೂಪಾಯಿ ನೋಟು ಆಗುವುದು ನಿಜವೇ? ಇದರ ಬಗ್ಗೆ ಆರ್‌ಬಿಐ ಏನು ಹೇಳಿದೆ? ಹಾಗೂ ಇದರ ಸ್ಪಷ್ಟನೆ ಏನು? ಎಂಬುದನ್ನು ತಿಳಿದುಕೊಳ್ಳಲು ಲೇಖನವನ್ನು ನೀವು ಕೊನೆಯವರೆಗೂ ಓದಿ ಸಂಪೂರ್ಣವಾದ ಮಾಹಿತಿ ನಿಮಗೆ ತಿಳಿಯುತ್ತದೆ.
200 ನೋಟುಗಳು ಬಂದ್ ಆಗುತ್ತಾ.?
200 ರೂಪಾಯಿ ನೋಟುಗಳ ರದ್ಧತಿಯ ಬಗ್ಗೆ ಸುದ್ದಿ ಒಂದು ಹರಿದಾಡುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಇದೀಗ ವ್ಯಾಪಕವಾಗಿ ಹರಿದಾಡುತ್ತಿದ್ದು 200 ರೂಪಾಯಿ ನೋಟುಗಳನ್ನು ಬಂದ್ ಮಾಡಲಾಗುವುದು ಎಂಬ ವದಂತಿಗಳು ಜನರನ್ನು ತೀರವಾಗಿ ಚರ್ಚೆ ಮಾಡುವಂತೆ ಮಾಡಿದೆ. ಈ ಸುದ್ದಿಯು ಗೊಂದಲವನ್ನು ಮೂಡಿಸಿದ್ದು ಭಾರತೀಯ ರಿಸರ್ವ್ ಬ್ಯಾಂಕ್ ಇದರ ಬಗ್ಗೆ ಸ್ಪಷ್ಟನೆಯನ್ನು ನೀಡಿರುತ್ತದೆ.
ಸದ್ಯಕ್ಕೆ ಇವಾಗ 200 ರೂಪಾಯಿ ನೋಟುಗಳು ಹೆಚ್ಚಿನ ಪ್ರಮಾಣದಲ್ಲಿ ಚಲಾವಣೆ ಪಡೆಯುತ್ತಿವೆ ಸಾರ್ವಜನಿಕರಿಗೆ ತಮ್ಮ ದೈನಂದಿನ ವಹಿವಾಟುಗಳಲ್ಲಿ ರೂ. 200 ನೋಟು ಮುಖ್ಯವಾದ ಪಾತ್ರ ವಹಿಸುತ್ತಿದೆ. ನೀವು ಸಾಮಾನ್ಯವಾಗಿ ಎಲ್ಲರಲ್ಲಿಯೂ ಕೂಡ ಎರಡು ನೂರು ರೂಪಾಯಿ ನೋಟುಗಳನ್ನು ಕಾಣಬಹುದಾಗಿದೆ. ಹಾಗಾಗಿ ಈ ಸುದ್ದಿಯನ್ನು ಹಲವಾರು ಜನರು ಹರಿದಾಡುವಂತೆ ಮಾಡುತ್ತಿದ್ದಾರೆ.
ಇಲ್ಲಿದೆ ಆರ್ ಬಿ ಐ ಸ್ಪಷ್ಟನೆ:
ಅಧಿಕೃತ ನೋಟಿಫಿಕೇಶನ್ ನಲ್ಲಿ ಆರ್ ಬಿ ಐ ತಿಳಿಸಿರುವ ಹಾಗೆ ರೂ.200 ನೋಟುಗಳನ್ನು ವಾಪಸ್ ಪಡೆಯುವ ಅಥವಾ ರದ್ದುಗೊಳಿಸುವ ಯಾವುದೇ ರೀತಿಯ ಉದ್ದೇಶ ಇಲ್ಲ ಎಂದು ತಿಳಿಸಿದೆ. 2000 ರೂಪಾಯಿ ನೋಟುಗಳನ್ನು ವಾಪಸ್ ಪಡೆದಿರುವ ಹಿನ್ನೆಲೆಯಲ್ಲಿ ನಕಲಿ ನೋಟುಗಳ ಸಂಖ್ಯೆ ಹೆಚ್ಚುತ್ತಿದೆ ಎಂಬ ಆಧಾರದ ಮೇಲೆ 200 ರೂಪಾಯಿಗಳ ಸುರಕ್ಷಿತ ಯ ಬಗ್ಗೆ ಜನರಿಗೆ ಎಚ್ಚರಿಕೆ ಇರಲಿ ಎಂದು ತಿಳಿಸಲಾಗಿದೆ.
ನಕಲಿ ನೋಟುಗಳು ಜಾಸ್ತಿ ಪ್ರಮಾಣದಲ್ಲಿ ಹರಿದಾಡುತ್ತಿದ್ದು ಆರ್ಥಿಕತೆಗೆ ಒಂದು ದೊಡ್ಡ ಸವಾಲಾಗಿದೆ ಎಂದು ಹೇಳಬಹುದಾಗಿದೆ ಕಲಿ ನೋಟುಗಳ ಚಲಾವಣೆಯು ದಿನೇ ದಿನೇ ಹೆಚ್ಚುತ್ತಿದೆ ಎಂದು ಆರ್‌ಬಿಐ ತಿಳಿಸಿರುತ್ತದೆ. ಈ ಹಿನ್ನೆಲೆಯಲ್ಲಿ ನೋಟುಗಳನ್ನು ಪರಿಶೀಲಿಸಿಕೊಳ್ಳುವುದನ್ನು ಮಾರ್ಗಸೂಚಿಯಾಗಿ ಬಿಡುಗಡೆ ಮಾಡಲಾಗಿದೆ.
ನಕಲಿ ನೋಟುಗಳ ಹರಿದಾಡುವಿಕೆಯನ್ನು ತಡೆಗಟ್ಟಲು ಭಾರತೀಯ ರಿಸರ್ವ್ ಬ್ಯಾಂಕ್ ಸಾರ್ವಜನಿಕರಲ್ಲಿ ಜಾಗೃತರಾಗಿರಲು ಮನವಿಯನ್ನು ಮಾಡಿದೆ ಹಾಗೂ ನೋಟುಗಳ ದೃಢತೆ ಪರೀಕ್ಷಿಸಲು ಗಮನ ಕೊಡಬೇಕೆಂದು ಕೂಡ ತಿಳಿಸಿದೆ.